ಇಂದಿರಾ ಗಾಂಧಿ ಜನ್ಮದಿನ
1 Post • 337 views
shrishail
758 views 2 months ago
ದೃಢ ಸಂಕಲ್ಪ, ಅಚಲ ಧೈರ್ಯ ಮತ್ತು ನಿರ್ಣಾಯಕ ನಾಯಕತ್ವದ ಪ್ರತೀಕವಾಗಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನದಂದು ಗೌರವದ ನಮನಗಳು. ದಿಟ್ಟ ಹಾಗೂ ಕ್ರಾಂತಿಕಾರಕ ನಿರ್ಧಾರಗಳ ಮೂಲಕ ದೇಶದ ಭದ್ರತೆ ಮತ್ತು ಪ್ರಗತಿಗೆ ದೃಢ ಬುನಾದಿ ಹಾಕುವುದರ ಜೊತೆಗೆ, ರೈತರು–ಶೋಷಿತರು–ಬಡಜನರ ಬಗ್ಗೆ ತೋರಿದ ಕಾಳಜಿ, ಅವರ ಬದುಕಿನ ಸುಧಾರಣೆಗೆ ಕೈಗೊಂಡ ಧೈರ್ಯಶಾಲಿ ಕ್ರಮಗಳು ದೇಶಕ್ಕೆ ನೂತನ ದಿಕ್ಕನ್ನು ನೀಡಿದವು. ಪೋಕ್ರಾನ್ನಲ್ಲಿ ಪರಮಾಣು ಪರೀಕ್ಷೆ ನಡೆಸಿ ಭಾರತವನ್ನು ಅಣ್ವಸ್ತ್ರ ಸಾಮರ್ಥ್ಯವುಳ್ಳ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲಿಸಿದ ಅವರ ಕೊಡುಗೆ ಅಪ್ರತಿಮ. ದೇಶದ ಸಮಗ್ರ ಅಭಿವೃದ್ಧಿಗೆ ಇಂದಿರಾ ಗಾಂಧಿಜಿಯವರ ಸೇವೆ ಎಂದಿಗೂ ಸ್ಮರಣೀಯ. #ಇಂದಿರಾ ಗಾಂಧಿ ಜನ್ಮದಿನ
9 likes
7 shares