ಬುಧವಾರ ಶುಭಾಶಯಗಳು
169 Posts • 850K views
Ram Ajekar
636 views 1 months ago
#💐ಬುಧವಾರದ ಶುಭಾಶಯ ಎಳೆ ಮಾವಿನ ಕಾಯಿಯ ಕಥೆ.., ಇನ್ನೂ ನಾಲ್ಕು ತಿಂಗಳು ಬಾಕಿಯಿದೆ ಚಳಿ ಬಂದರೆ ಹಣ್ಣುಗಳ ಋತುವಿಗೆ ರುಜು ಬರೆದಂತೆ, ಇಲ್ಲದಿದ್ದರೆ ಬರಗಾಲ ಹೆಚ್ಚು ಎಂಬುದು ಸ್ತಳಿಯರ ನಂಬಿಕೆ ಕಳೆದ ವರ್ಷ ಚಳಿ ಇರಲಿಲ್ಲ, ಆದ್ದರಿಂದ ಮಾವಿನ ರುತು ತಡವಾಗಿ ಆರಂಭವಾಗಿತ್ತು. ಕರಾವಳಿ ಪ್ರದೇಶದಲ್ಲಿ ಮಾವಿನಕಾಯಿ ಗೇರುಹಣ್ಣು ಹಣ್ಣು ಬೆಳೆಯಲು ಚಳಿ ಅತ್ಯಂತ ಮುಖ್ಯ. ಚಳಿ ಇಲ್ಲದಿದ್ದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹಣ್ಣಿನ ಇಳುವರಿಯನ್ನೇ ಹಾಳುಮಾಡುತ್ತವೆ. ಹವಾಮಾನವೇ ಮಾವಿನ ಹಣ್ಣಿನ ಭಾಗ್ಯ ನಿರ್ಧರಿಸುತ್ತದೆ. ನಾನು ಶಾಲೆಯಲ್ಲಿದ್ದಾಗಿನ ದಿನಗಳು ನೆನಪಾಗುತ್ತವೆ . ಮಕ್ಕಳಿಗೆ ಎಳೆ ಮಾವಿನಕಾಯಿ ಕಿತ್ತು ಕೊಡುವ ಆ ಸಂತೋಷ! ಮನೆಯಲ್ಲಿ ನಿತ್ಯ ತೆಂಗಿನಕಾಯಿ, ಮೆಣಸು, ಸಾಸಿವೆ, ಬೆಳ್ಳುಳ್ಳಿ, ಉಪ್ಪು, ನೀರಿನಲ್ಲಿ ನುಣ್ಣಗೆ ರುಬ್ಬಿ ತಯಾರಿಸಿದ ಮಾವಿನಕಾಯಿ ಚಟ್ನಿ… ಅದಕ್ಕೆ ಜೊತೆಯಾಗಿ ಬಿಸಿ ಕುಚ್ಚಲಕ್ಕಿಯ ಗಂಜಿ ಅನ್ನ ಊಟಕ್ಕೆ ಸ್ವರ್ಗದ ಸುವಾಸನೆ ಇರುತ್ತಿತ್ತು. ಅವತ್ತು ಮರಕ್ಕೆ ಹತ್ತಿ ಮಾವಿನಕಾಯಿ ಕೀಳುವುದು ಸಾಹಸವಾಗಿತ್ತು. ರಸ್ತೆ ಬದಿಯಲ್ಲಿದ್ದ ಆ ಮರವಿಗೆ ವಾಹನಗಳ ಹೊಗೆ, ದೂಳು ತಗುಲುತ್ತಿದ್ದರೂ ಅದರ ಹೂಗಳಿಗೆ ಪರಾಗಸ್ಪರ್ಶ ಸುಲಭವಾಗುತ್ತಿತ್ತು. ಆ ಮರದಲ್ಲಿ ಕೆಂಪಿರುವೆಗಳು ಮನೆಮಾಡಿದ್ದವು; ಅವು ಕಚ್ಚಿದರೆ ದೇಹ ಬೆಂದಂತಾಗುತ್ತಿತ್ತು. ಕಾಲ ಬದಲಾಗಿದಂತೆ ಮರಕ್ಕೆ ಹತ್ತುವವರು ಕಡಿಮೆಯಾದರು, ಆದರೆ "ಕಲ್ಲು ಬಿಸಾಡುವ ಪರಿಣಿತರ" ತಂಡಗಳು ಹೆಚ್ಚಾದವು. ಮರಕ್ಕೆ ಕಲ್ಲುಗಳ ಗಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಎಷ್ಟೇ ಆಗಲಿ, ಕಲುಪ್ಪು ಜೊತೆ ಎಳೆ ಮಾವಿನಕಾಯಿ ತಿನ್ನುವ ಚಂದ ಬೇರೆ ಅದೊಂದು ವಿಶಿಷ್ಟ ರುಚಿ ,ಮರಕ್ಕೆ ಕಲ್ಲು ಬಿಸಾಡಿ ಮಾವಿನಕಾಯಿ ತಿಂದರೂ, ಆ ರಸಾಸ್ವಾದದ ಆನಂದ ಅಷ್ಟೇ ವಿಭಿನ್ನ. ಮನೆಯ ಯಜಮಾನ ತೆಂಗಿನ ಕಾಯಿ ಕಳ್ಳತನದ ಬಗ್ಗೆ ಭಾರಿ ಚಿಂತಕ್ರಾಂತ ನಾಗಿದ್ದ, ಮಾವಿನ ಕಾಯಿ ಯಾರು ಬೆಕಾದರು ತೆಗೆಯಿರಿ ಎಂದು ಎಲ್ಲರಿಗು ಹೇಳುತಿದ್ದ, ಯಾಕೆಂದರೆ ಹಳ್ಳಿಗರ ಮನಸ್ಸು ದಾನದಲ್ಲಿ ಶೂರರು ಅಲ್ವೆ. ಅದರಲ್ಲಿ ಮೋಸವಿಲ್ಲ. ಮಕ್ಕಳಾಟಿಕೆ ಅಲ್ವಾ ಎಂದು ಕಲ್ಳು ಬಿಸಾಡುವವರನ್ನು ಪ್ರೋತ್ಸಾಹಿಸುತಿದ್ದರು, ಕೆಲವೊಮ್ಮೆ ಯಜಮಾನನೆ ದೋಟಿಯಲ್ಲಿ ಎಳೆ ಮಾವಿನ ಕಾಯಿಯನ್ನು ಕಿತ್ತುಕೊಡುವ ಕಾರ್ಯ ಮಾಡುತಿದ್ದರು. ಒಮ್ಮೆ ಒಂದು ವಿಚಿತ್ರ ಘಟನೆ. ತೋಟದ ದೂರದಲ್ಲಿ ಕೆಲವು ಮಂದಿ ಮಾವಿನಕಾಯಿ ಕೀಳಲು ಕಲ್ಲು ಬಿಸಾಡುತ್ತಿದ್ದರು. ಅದೇ ವೇಳೆಯಲ್ಲಿ ತೋಟದೊಳಗೆ ತೆಂಗಿನಕಾಯಿ ಕದಿಯಲು ಬಂದಿದ್ದ ಯುವಕನ ಮೇಲೆ ಒಂದು ಕಲ್ಲು ಬಿದ್ದು ಗಾಯವಾಯಿತು. ಆತ ನೋವಿನಿಂದ ಬೊಬ್ಬೆ ಹಾಕಿದ. ಜನ ಓಡಿ ಬಂದು ಹಿಡಿದರು. ಬಹುಕಾಲದಿಂದ ತೆಂಗಿನಕಾಯಿ ಕಳೆದು ಹೋಗುತ್ತಿದ್ದ ಸುಳಿವು ಕೊನೆಗೂ ಸಿಕ್ಕಿತು. ಯಾರು ಕದಿಯುತ್ತಿದ್ದರು ಎಂಬುದು ಗೊತ್ತಾಗದಿದ್ದರೂ, ಆ ದಿನ ಬಿದ್ದ ಒಂದೇ ಕಲ್ಲು ಎಲ್ಲವನ್ನೂ ಬಿಚ್ಚಿಟ್ಟಿತು ಕಲ್ಲು ಬಿಸಾಡಿದವರ ಕಲೆ, ಕಳ್ಳನ ಕಥೆಯಾಗಿ ಬದಲಾಗಿದೆ. ಹೀಗೆ, ಮಾವಿನಕಾಯಿ ಕಥೆ ಕೊನೆಗೆ ತೆಂಗಿನಕಾಯಿ ಕಳ್ಳನ ಸಿಕ್ಕಿಬೀಳುವ ಕಥೆಯಾಯ್ತು ಪ್ರಕೃತಿಯ ಆಟವೋ, ಪಾಪದ ಫಲವೋ, ಯಾರಿಗೂ ಅರ್ಥವಾಗಲಿಲ್ಲ.. ರಾಂ ಅಜೆಕಾರು ಕಾರ್ಕಳ #ಹಳ್ಳಿಕಥೆ #ತುಳುನಾಡು #ಕಂಬಳ #ತುಳುಸಂಸ್ಕೃತಿ #ತುಳುನಾಡಿನಜಾನಪದ #ಬೋವೀಕೆಂಬಳ #ಭೂತಕೋಲ #ತುಳುನಾಡಿನಸಿರಿನೋಟ #rurallife #karkalaudupi #ಬುಧವಾರ ಶುಭಾಶಯಗಳು #💐ಬುಧವಾರ ಶುಭಾಶಯಗಳು #ಶುಭ ಬುಧವಾರ 💐 #ಶುಭ ಬುಧವಾರ
7 likes
12 shares