ಶುಭ ಬುಧವಾರ
205 Posts • 1M views
Ram Ajekar
646 views 6 days ago
#📢ದೀಪಾವಳಿ ಗಿಫ್ಟ್ : ಗೃಹ ಲಕ್ಷ್ಮಿಫಲಾನುಭವಿಗಳಿಗೆ 6000 ರೂಪಾಯಿ 🤩 ತುಳುನಾಡಿನ ದೀಪಾವಳಿಯ ಮೂರನೇ ದಿನದ ಸಂಭ್ರಮ ಸಂಸ್ಕೃತಿ, ಸಂಪ್ರದಾಯ ಮತ್ತು ಮಾಂಕಾಳಿ ನೃತ್ಯ ತುಳುನಾಡಿನ ಸಂಸ್ಕೃತಿ ವೈವಿಧ್ಯಮಯವಾದದ್ದು. ಇಲ್ಲಿಯ ಆಚರಣೆಗಳು ಪ್ರತಿ ನದಿ ತೀರ, ಪ್ರತಿ ಊರಿನಲ್ಲಿ ಸ್ವಲ್ಪ ಸ್ವಲ್ಪ ಬದಲಾಗುತ್ತವೆ. ಆದರೆ ಎಲ್ಲೆಡೆ ಕಾಣಿಸಿಕೊಳ್ಳುವ ಸಂಸ್ಕೃತಿಯ ಸುವಾಸನೆ ಒಂದೇ — ಪರಂಪರೆಯ ಗೌರವ ಮತ್ತು ಭಕ್ತಿಯ ನಿಷ್ಠೆ. ದೀಪಾವಳಿಯ ಅಮಾವಾಸ್ಯೆಯಂದು ಹಲವೆಡೆ “ಸಯಿತಿನಕ್ಲೆನೆ ಪರ್ಬ” (ಅಂದರೆ ಪೂರ್ವಜರ ಸ್ಮರಣೆಯ ಹಬ್ಬ) ಆಚರಣೆ ಮಾಡುತ್ತಾರೆ. ಕರಾವಳಿ ಪ್ರದೇಶವಾಗಿರುವುದರಿಂದ ತುಳುನಾಡಿನಲ್ಲಿ ಮೀನುಗಾರಿಕೆ ಜೀವನದ ಅವಿಭಾಜ್ಯ ಭಾಗವಾಗಿದೆ. ಈ ದಿನ ಮನೆಗಳಲ್ಲಿ ಪಲ್ಯ, ಒಣಮೀನು ಚಟ್ನಿ, ಮೀನಿನ ಸಾರು, ಕುಚ್ಚಲಕ್ಕಿ ಅನ್ನ ಸೇರಿದಂತೆ ವಿವಿಧ ವಿಧದ ಅಡುಗೆಗಳು ತಯಾರಾಗುತ್ತವೆ. ನಂತರ ಅಗೆಲಿಗೆ ಬಡಿಸಿ ಪ್ರಾರ್ಥನೆ ಸಲ್ಲಿಸಿ, ಕುಟುಂಬದವರು ಊಟ ಮಾಡುತ್ತಾರೆ. ಗುತ್ತಿನ ಮನೆಗಳಲ್ಲಿ ಈ ದಿನ ಮಾಂಕಾಳಿ ನೃತ್ಯ ನಡೆಯುವುದು ವಿಶಿಷ್ಟ ಪರಂಪರೆ. ಕಾರ್ಕಳ ಹಾಗು ಹೆಬ್ರಿ ತಾಲುಕಿನ ಕೆಲವು ಭಾಗಗಳಲ್ಲಿ‌ಮಾತ್ರ ಕಾಣಸಿಗುತ್ತದೆ. ಮಾಂಕಾಳಿ ನೃತ್ಯಗಾರರು ಮನೆ ಮನೆಗೆ ತೆರಳಿ ನೃತ್ಯ ಪ್ರದರ್ಶಿಸುತ್ತಾರೆ. ಅವರನ್ನು ಸ್ವಾಗತಿಸುವಾಗ ತಟ್ಟೆಯ (ತಡಪೆ) ಮೇಲೆ ಅಕ್ಕಿ ಅಥವಾ ಭತ್ತ, ಮೆಣಸು, ಉಪ್ಪು, ವಿಳ್ಯದೆಲೆ, ಅಡಿಕೆ, ತೆಂಗಿನಕಾಯಿ ಹಾಗೂ ಅಡಿಗೆಯ ಸಾಮಾಗ್ರಿಗಳನ್ನು ಇಟ್ಟು ಕೊಡುತ್ತಾರೆ. ಮಾಂಕಾಳಿ ಮುಖವಾಡವು ಕಣ್ಣು, ಮೂಗು, ತೆರೆದ ಬಾಯಿ ಮತ್ತು ಚಾಚಿದ ನಾಲಿಗೆಯೊಂದಿಗೆ ಬಿಳಿ, ಹಳದಿ, ಕಪ್ಪು, ಹಸಿರು ಹಾಗೂ ಕೆಂಪು ಬಣ್ಣಗಳಿಂದ ಅಲಂಕರಿಸಲ್ಪಟ್ಟಿರುತ್ತದೆ. ಪಾರ್ದನದ ಹಾಡುಗಳು ತೆಂಬರೆ (ತಂತಿ ವಾದ್ಯ) ನಾದದೊಂದಿಗೆ ಹಾಡಲ್ಪಡುತ್ತವೆ. ತೆಂಬರೆಯ ತಾಳಕ್ಕೆ ಅನುಗುಣವಾಗಿ ನೃತ್ಯಗಾರನು ಸಣ್ಣ ಹೆಜ್ಜೆಗಳನ್ನು ಹಾಕುತ್ತಾ ಸುತ್ತುತ್ತಾ ನರ್ತಿಸುತ್ತಾನೆ. ದೀಪಾವಳಿಯ ಸಂದರ್ಭದಲ್ಲಿಯೇ ಇನ್ನೊಂದು ವಿಶಿಷ್ಟ ಆಚರಣೆ ಎಂದರೆ ಕೋಳಿ ಅಂಕ. ಇದು ಸ್ಥಳೀಯ ಕೋಳಿ ಪೈಲ್ವಾನರ ನಡುವೆ ನಡೆಯುವ ಕೋಳಿ ಹೋರಾಟ. ಅಧಿಕೃತವಾಗಿ ಇಲಾಖೆಯಿಂದ ಕೋಳಿ ಅಂಕ ನಿಷೇಧಿಸಲ್ಪಟ್ಟಿದ್ದರೂ, ಕೆಲವು ಕಾಡು ಹಾಗೂ ಹೊಲ ಪ್ರದೇಶಗಳಲ್ಲಿ ಇಂದಿಗೂ ರಹಸ್ಯವಾಗಿ ನಡೆಯುವುದುಂಟು. ಗೆದ್ದ ಕೋಳಿಯನ್ನು ಬಂಟ ಕೋಳಿ ಎಂದು, ಸೋತು ಸತ್ತ ಕೋಳಿಯನ್ನು ಒಟ್ಟೆ ಕೋಳಿ ಎಂದು ಕರೆಯುತ್ತಾರೆ. ಸೋತ ಕೋಳಿಯನ್ನು ಬಾಜಿ ಕಟ್ಟಿದ ನಂತರ ಗೆದ್ದ ಕೋಳಿಯ ಮಾಲೀಕರು ತಮ್ಮ ಮನೆಗೆ ತೆಗೆದುಕೊಂಡು ಹೋಗಿ ಬಾಣಲೆಯಲ್ಲಿ ಬೇಯಿಸಿ ಸಣ್ಣ ಪಾರ್ಟಿ ನಡೆಸುವ ಪರಂಪರೆಯೂ ಇದೆ.. ರಾಂ ಅಜೆಕಾರು ಕಾರ್ಕಳ https://wp.me/pcXa3R-4p #🪕✨ದೀಪಾವಳಿಯ ಟ್ರೆಂಡಿಂಗ್ ಹಾಡುಗಳು 🎶 #ಸ್ಪೂರ್ತಿ ದಾಯಕ ಮಾತು ಗಳು👌👍 #💐ಗುರುವಾರದ ಶುಭಾಶಯಗಳು #ಶುಭ ಬುಧವಾರ
1 like
6 shares
Ram Ajekar
574 views 13 days ago
#💐ಬುಧವಾರದ ಶುಭಾಶಯ ಎಳೆ ಮಾವಿನ ಕಾಯಿಯ ಕಥೆ.., ಇನ್ನೂ ನಾಲ್ಕು ತಿಂಗಳು ಬಾಕಿಯಿದೆ ಚಳಿ ಬಂದರೆ ಹಣ್ಣುಗಳ ಋತುವಿಗೆ ರುಜು ಬರೆದಂತೆ, ಇಲ್ಲದಿದ್ದರೆ ಬರಗಾಲ ಹೆಚ್ಚು ಎಂಬುದು ಸ್ತಳಿಯರ ನಂಬಿಕೆ ಕಳೆದ ವರ್ಷ ಚಳಿ ಇರಲಿಲ್ಲ, ಆದ್ದರಿಂದ ಮಾವಿನ ರುತು ತಡವಾಗಿ ಆರಂಭವಾಗಿತ್ತು. ಕರಾವಳಿ ಪ್ರದೇಶದಲ್ಲಿ ಮಾವಿನಕಾಯಿ ಗೇರುಹಣ್ಣು ಹಣ್ಣು ಬೆಳೆಯಲು ಚಳಿ ಅತ್ಯಂತ ಮುಖ್ಯ. ಚಳಿ ಇಲ್ಲದಿದ್ದರೆ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳು ಹಣ್ಣಿನ ಇಳುವರಿಯನ್ನೇ ಹಾಳುಮಾಡುತ್ತವೆ. ಹವಾಮಾನವೇ ಮಾವಿನ ಹಣ್ಣಿನ ಭಾಗ್ಯ ನಿರ್ಧರಿಸುತ್ತದೆ. ನಾನು ಶಾಲೆಯಲ್ಲಿದ್ದಾಗಿನ ದಿನಗಳು ನೆನಪಾಗುತ್ತವೆ . ಮಕ್ಕಳಿಗೆ ಎಳೆ ಮಾವಿನಕಾಯಿ ಕಿತ್ತು ಕೊಡುವ ಆ ಸಂತೋಷ! ಮನೆಯಲ್ಲಿ ನಿತ್ಯ ತೆಂಗಿನಕಾಯಿ, ಮೆಣಸು, ಸಾಸಿವೆ, ಬೆಳ್ಳುಳ್ಳಿ, ಉಪ್ಪು, ನೀರಿನಲ್ಲಿ ನುಣ್ಣಗೆ ರುಬ್ಬಿ ತಯಾರಿಸಿದ ಮಾವಿನಕಾಯಿ ಚಟ್ನಿ… ಅದಕ್ಕೆ ಜೊತೆಯಾಗಿ ಬಿಸಿ ಕುಚ್ಚಲಕ್ಕಿಯ ಗಂಜಿ ಅನ್ನ ಊಟಕ್ಕೆ ಸ್ವರ್ಗದ ಸುವಾಸನೆ ಇರುತ್ತಿತ್ತು. ಅವತ್ತು ಮರಕ್ಕೆ ಹತ್ತಿ ಮಾವಿನಕಾಯಿ ಕೀಳುವುದು ಸಾಹಸವಾಗಿತ್ತು. ರಸ್ತೆ ಬದಿಯಲ್ಲಿದ್ದ ಆ ಮರವಿಗೆ ವಾಹನಗಳ ಹೊಗೆ, ದೂಳು ತಗುಲುತ್ತಿದ್ದರೂ ಅದರ ಹೂಗಳಿಗೆ ಪರಾಗಸ್ಪರ್ಶ ಸುಲಭವಾಗುತ್ತಿತ್ತು. ಆ ಮರದಲ್ಲಿ ಕೆಂಪಿರುವೆಗಳು ಮನೆಮಾಡಿದ್ದವು; ಅವು ಕಚ್ಚಿದರೆ ದೇಹ ಬೆಂದಂತಾಗುತ್ತಿತ್ತು. ಕಾಲ ಬದಲಾಗಿದಂತೆ ಮರಕ್ಕೆ ಹತ್ತುವವರು ಕಡಿಮೆಯಾದರು, ಆದರೆ "ಕಲ್ಲು ಬಿಸಾಡುವ ಪರಿಣಿತರ" ತಂಡಗಳು ಹೆಚ್ಚಾದವು. ಮರಕ್ಕೆ ಕಲ್ಲುಗಳ ಗಾಯಗಳು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು. ಎಷ್ಟೇ ಆಗಲಿ, ಕಲುಪ್ಪು ಜೊತೆ ಎಳೆ ಮಾವಿನಕಾಯಿ ತಿನ್ನುವ ಚಂದ ಬೇರೆ ಅದೊಂದು ವಿಶಿಷ್ಟ ರುಚಿ ,ಮರಕ್ಕೆ ಕಲ್ಲು ಬಿಸಾಡಿ ಮಾವಿನಕಾಯಿ ತಿಂದರೂ, ಆ ರಸಾಸ್ವಾದದ ಆನಂದ ಅಷ್ಟೇ ವಿಭಿನ್ನ. ಮನೆಯ ಯಜಮಾನ ತೆಂಗಿನ ಕಾಯಿ ಕಳ್ಳತನದ ಬಗ್ಗೆ ಭಾರಿ ಚಿಂತಕ್ರಾಂತ ನಾಗಿದ್ದ, ಮಾವಿನ ಕಾಯಿ ಯಾರು ಬೆಕಾದರು ತೆಗೆಯಿರಿ ಎಂದು ಎಲ್ಲರಿಗು ಹೇಳುತಿದ್ದ, ಯಾಕೆಂದರೆ ಹಳ್ಳಿಗರ ಮನಸ್ಸು ದಾನದಲ್ಲಿ ಶೂರರು ಅಲ್ವೆ. ಅದರಲ್ಲಿ ಮೋಸವಿಲ್ಲ. ಮಕ್ಕಳಾಟಿಕೆ ಅಲ್ವಾ ಎಂದು ಕಲ್ಳು ಬಿಸಾಡುವವರನ್ನು ಪ್ರೋತ್ಸಾಹಿಸುತಿದ್ದರು, ಕೆಲವೊಮ್ಮೆ ಯಜಮಾನನೆ ದೋಟಿಯಲ್ಲಿ ಎಳೆ ಮಾವಿನ ಕಾಯಿಯನ್ನು ಕಿತ್ತುಕೊಡುವ ಕಾರ್ಯ ಮಾಡುತಿದ್ದರು. ಒಮ್ಮೆ ಒಂದು ವಿಚಿತ್ರ ಘಟನೆ. ತೋಟದ ದೂರದಲ್ಲಿ ಕೆಲವು ಮಂದಿ ಮಾವಿನಕಾಯಿ ಕೀಳಲು ಕಲ್ಲು ಬಿಸಾಡುತ್ತಿದ್ದರು. ಅದೇ ವೇಳೆಯಲ್ಲಿ ತೋಟದೊಳಗೆ ತೆಂಗಿನಕಾಯಿ ಕದಿಯಲು ಬಂದಿದ್ದ ಯುವಕನ ಮೇಲೆ ಒಂದು ಕಲ್ಲು ಬಿದ್ದು ಗಾಯವಾಯಿತು. ಆತ ನೋವಿನಿಂದ ಬೊಬ್ಬೆ ಹಾಕಿದ. ಜನ ಓಡಿ ಬಂದು ಹಿಡಿದರು. ಬಹುಕಾಲದಿಂದ ತೆಂಗಿನಕಾಯಿ ಕಳೆದು ಹೋಗುತ್ತಿದ್ದ ಸುಳಿವು ಕೊನೆಗೂ ಸಿಕ್ಕಿತು. ಯಾರು ಕದಿಯುತ್ತಿದ್ದರು ಎಂಬುದು ಗೊತ್ತಾಗದಿದ್ದರೂ, ಆ ದಿನ ಬಿದ್ದ ಒಂದೇ ಕಲ್ಲು ಎಲ್ಲವನ್ನೂ ಬಿಚ್ಚಿಟ್ಟಿತು ಕಲ್ಲು ಬಿಸಾಡಿದವರ ಕಲೆ, ಕಳ್ಳನ ಕಥೆಯಾಗಿ ಬದಲಾಗಿದೆ. ಹೀಗೆ, ಮಾವಿನಕಾಯಿ ಕಥೆ ಕೊನೆಗೆ ತೆಂಗಿನಕಾಯಿ ಕಳ್ಳನ ಸಿಕ್ಕಿಬೀಳುವ ಕಥೆಯಾಯ್ತು ಪ್ರಕೃತಿಯ ಆಟವೋ, ಪಾಪದ ಫಲವೋ, ಯಾರಿಗೂ ಅರ್ಥವಾಗಲಿಲ್ಲ.. ರಾಂ ಅಜೆಕಾರು ಕಾರ್ಕಳ #ಹಳ್ಳಿಕಥೆ #ತುಳುನಾಡು #ಕಂಬಳ #ತುಳುಸಂಸ್ಕೃತಿ #ತುಳುನಾಡಿನಜಾನಪದ #ಬೋವೀಕೆಂಬಳ #ಭೂತಕೋಲ #ತುಳುನಾಡಿನಸಿರಿನೋಟ #rurallife #karkalaudupi #ಬುಧವಾರ ಶುಭಾಶಯಗಳು #💐ಬುಧವಾರ ಶುಭಾಶಯಗಳು #ಶುಭ ಬುಧವಾರ 💐 #ಶುಭ ಬುಧವಾರ
7 likes
12 shares