Failed to fetch language order
🌺ಹೂವುಗಳ ಬೆಲೆಯಲ್ಲಿ ಭಾರೀ ಕುಸಿತ ರೈತರ ಆಕ್ರೋಶ 🚨
3 Posts • 6K views
#🌺ಹೂವುಗಳ ಬೆಲೆಯಲ್ಲಿ ಭಾರೀ ಕುಸಿತ ರೈತರ ಆಕ್ರೋಶ 🚨 ಬೆಂಗಳೂರು:ಸತತವಾಗಿ ಮಳೆ ಸುರಿಯುತ್ತಿರುವುದರಿಂದ ಹೂವುಗಳು ಗುಣಮಟ್ಟ ಕಳೆದುಕೊಂಡ ಹಿನ್ನೆಲೆಯಲ್ಲಿ ಹೂವುಗಳು ನೆರೆಯ ರಾಜ್ಯಗಳಿಗೆ ಹಾಗೂ ವಿದೇಶಕ್ಕೆ ರಫ್ತು ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಬೆಲೆ ಇಳಿಕೆಗೆ ಕಾರಣವಾಗಿದೆ.ಚಿಕ್ಕಬಳ್ಳಾಪುರ, ಚಿಂತಾಮಣಿ ತಾಲೂಕು ವಿವಿಧೆಡೆ ರೈತರು ನಾಡಹಬ್ಬದಸರಾ ಸಂದರ್ಭದಲ್ಲಿ ಹೂವುಗಳಿಗೆ ಉತ್ತಮ ಬೆಲೆ ನಿರೀಕ್ಷಿಸಿದ್ದರು, ಕಲರ್ ಕಲರ್ ಸೇವಂತಿ, ಗುಲಾಬಿ, ಚೆಂಡು ಸೇರಿದಂತೆ ಇತರ ಹೂವಿನ ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಈ ಹಿಂದೆ ಪಿತೃಪಕ್ಷದ ಸಮಯದಲ್ಲಿ ಬೆಲೆ ಇಳಿಕೆ ಸಹಜ ಎಂದುಕೊಂಡರೆ ಈಗ ದಸರಾ ಸಮಯ ದಲ್ಲೂ ಬೆಲೆ ಏರಿಕೆಯಾಗದಿರುವುದು ರೈತರನ್ನು ಬಾರೀ ಸಂಕಷ್ಟಕ್ಕೆ ದುಡಿದೆ. ಬಯಲುಸೀಮೆ ಪ್ರದೇಶವಾಗಿರುವ ಚಿಕ್ಕಬಳ್ಳಾಪುರದ ಈ ಭಾಗದಲ್ಲಿ ಯಾವುದೇ ನದಿ ನಾಲಾ ಗಳಿಲ್ಲದ ಜಿಲ್ಲೆ ನಮ್ಮದು. ನೀರಿಗಾಗಿ ಹೆಂಡತಿ ಮಕ್ಕಳ ಮೈಮೇಲಿನ ಒಡವೆಗಳನ್ನು ಮಾರಿ, ಸಾಲ ಸೋಲ ಮಾಡಿ ಬೋರ್‌ ವೆಲ್‌ ಹಾಕಿಸಿ, ಸಮೃದ್ಧ ಬೆಳೆ ಬೆಳೆದರೂ ಮಾರುಕಟ್ಟೆಯಲ್ಲಿ ಕೊಳ್ಳುವವ ರಿಲ್ಲ. 40 ಕೆಜಿ ಹೂವಿನ ಬ್ಯಾಗ್‌ ಮಾರಿದರೂ ರೂ 300 ರಿಂದ 500 ಬರುತ್ತದೆ. ಹೂ ಕೀಳುವ ಕೂಲಿ ಸಹಾ ಬರುವುದಿಲ್ಲ. ಈಗಲಾದರೂ ಸರ್ಕಾರ ನಮ ನೆರವಿಗೆ ಬರಬೇಕಿದೆ ಪುರದಗಡ್ಡೆ ಮಹಿಳೆ ಗಾಯತ್ರಿ ಅಂಬರೀಶ್‌ ಆಗ್ರಹಿಸಿದರು.ಆದರೆ ಚಿಲ್ಲರೆ ದರ ಸೇವಂತಿಗೆ 200 ರೂ. ಗುಲಾಬಿ 160 ರೂ. ಮಾರಾಟಮಾಡುತ್ತಾರೆ. ನಮಗೆ ಮಾತ್ರ ಬೆಲೆ ಸಿಗುವುದಿಲ್ಲ ಎಂದು ರೈತರು ದೂರುತ್ತಾರೆ.
21 likes
11 shares