ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ನಮ್ಮ ಮನೆಯದಸರಾ ಗೋಂಬೇಗಳು
36 Posts • 8K views
ಮಂಜುಳ
726 views 11 days ago
#ನವರಾತ್ರಿಯ ಮೊದಲನೇ ದಿನ 💛"ಶೈಲ ಪುತ್ರಿ"💛 #🙏 ನವರಾತ್ರಿ ಶುಭಾಶಯಗಳು🔱🔱 #ನವರಾತ್ರಿ #ನವರಾತ್ರಿ ಹಬ್ಬದ ಶುಭಾಶಯಗಳು....p #ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ನಮ್ಮ ಮನೆಯದಸರಾ ಗೋಂಬೇಗಳು ನವರಾತ್ರಿಯ ಮೊದಲನೇ ದಿನ ದೇವಿ ಶೈಲ ಪುತ್ರಿ 🤍 ಶೈಲ ಪುತ್ರಿ ದೇವಿಯು ಆದಿಶಕ್ತಿಯ ಸ್ವರೂಪವಾಗಿದ್ದು , ಹಿಮಾಲಯದ ಪರ್ವತರಾಜನ ಮಗಳಾಗಿ ಜನಿಸಿದ ಪಾರ್ವತಿ ದೇವಿಯ ಅವತಾರವಾಗಿ , ತಮ್ಮ ಗಂಡ ಶಿವನನ್ನು ಮದುವೆಯಾಗಲು ತೀವ್ರ ತಪಸ್ಸು ಮಾಡಿ ಯಶಸ್ವಿಯಾಗಿ ಶಿವನ ಪ್ರೀತಿ ಗಳಿಸಿ ನವರಾತ್ರಿಯ ಮೊದಲ ದಿನ ಪೂಜಿಸಲ್ಪಡುವ ದೇವತೆಯಾಗಿದ್ದಾರೆ..
12 likes
3 comments 8 shares
Ram Ajekar
1K views 12 days ago
ದೇವಿ ದರುಶನ : ಸ್ವರ್ಣ ನದಿಯ ತಟದಲ್ಲಿ ಸೌಮ್ಯವಾಗಿ ವಾಸಿಸುವ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ತಾಯಿ, ಅಮ್ಮನಂತೆ ಮಮತೆಯ ರೂಪ, ದೇವಿಯಂತೆ ದಿವ್ಯ ಕರುಣೆಯ ರೂಪದಿಂದ ಎಲ್ಲರನ್ನು ಮೆರೆಯುತ್ತಾಳೆ. ಅವಳ ಸಾನ್ನಿಧ್ಯಕ್ಕೆ ಬರುವ ಪ್ರತಿಯೊಬ್ಬ ಭಕ್ತನೂ, “ನೀನು ಒಂಟಿಯಲ್ಲ, ನಿನ್ನ ತಾಯಿ ನನ್ನ ಜೊತೆಯಲ್ಲಿದ್ದಾಳೆ” ಎಂಬ ಭರವಸೆ ಪಡೆಯುತ್ತಾನೆ. ಅದೇ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದ ಆದಿಶಕ್ತಿ ಮಹಾಲಕ್ಷ್ಮೀ ದೇವಸ್ಥಾನ. ಅವಳ ಕಣ್ಣುಗಳಲ್ಲಿ ಕಾಣುವ ಮಮತೆಯೇ ತೇವ, ಆಪ್ತ ನಗು, ಪಾದದಲ್ಲಿ ಶಾಂತಿಯ ಸ್ಪರ್ಶ. ಅವಳು ಅಷ್ಟಭುಜಿಯಲ್ಲಿ ಶಕ್ತಿ, ಸಂಪತ್ತು, ಧೈರ್ಯ, ಜ್ಞಾನ, ಭಕ್ತಿ, ಸಂಯಮ, ಸೌಂದರ್ಯ ಮತ್ತು ಕರುಣೆಯ ದೀಪವನ್ನು ಹಿಡಿದಿರುವ ತಾಯಿ. ಭಕ್ತನು ಕಣ್ಣೀರು ಹಾಕಿದರೆ ಭಕ್ತನು ಬೇಡಿದರೆ ಇಷ್ಟಾರ್ಥವನ್ನು ಅನುಗ್ರಹಿಸುವಾಳೆ. ಅವಳ ಪಾದ ತಟ್ಟಿದ ಸ್ವರ್ಣ ನದಿ ತಾಯಿಯ ಮಹಿಮೆಯನ್ನು ಹೊತ್ತು ಹರಿಯುತ್ತಾ, ಉಡುಪಿ ಜಿಲ್ಲೆಯ ಜೀವನಾಡಿಯಾಗಿ ಹರಿಯುತ್ತದೆ. ಸ್ವರ್ಣದ ತೀರದಲ್ಲಿ ತಾಯಿ ಸದಾ ಪ್ರತಿಷ್ಠಿತಳಾಗಿ, “ಮಕ್ಕಳನ್ನು ರಕ್ಷಿಸುವ ತಾಯಿ” ಎಂಬ ಹೆಸರಿನಲ್ಲಿ ಪ್ರಸಿದ್ಧಳಾಗಿದ್ದಾಳೆ. ದೇವಾಲಯದ ಇತಿಹಾಸವೂ ತಾಯಿಯ ಕೃಪೆಯ ಸಾಕ್ಷಿಯಾಗಿದೆ. ಗೋಮಾಂತಕವನ್ನು ತೊರೆದು ಬಂದ ರಾಜಾಪುರ ಸಾರಸ್ವತ ಬ್ರಾಹ್ಮಣರು ತಮ್ಮ ಧಾರ್ಮಿಕ ಸಂಸ್ಕೃತಿಯನ್ನು ಉಳಿಸಿಕೊಳ್ಳಲು, 1891ರಲ್ಲಿ ಈ ಪವಿತ್ರ ಭೂಮಿಯಲ್ಲಿ ತಾಯಿಯನ್ನು ಪ್ರತಿಷ್ಠಾಪಿಸಿದರು. ಆಗಿನಿಂದ ಇಂದಿನವರೆಗೂ, ತಾಯಿ ಲಕ್ಷ್ಮಿಯ ಸಾನ್ನಿಧ್ಯ ಈ ಭೂಮಿಯಲ್ಲಿ ಶಾಶ್ವತವಾಗಿದ್ದು, ಅನೇಕರಿಗೆ ಆಶ್ರಯ, ಸಮೃದ್ಧಿ ಮತ್ತು ಸಂತೋಷವನ್ನು ನೀಡುತ್ತಿದೆ. ಲಕ್ಷ್ಮೀಪುರದ ಶ್ರೀ ಆದಿಶಕ್ತಿ ಮಹಾಲಕ್ಷ್ಮಿ ತಾಯಿ – “ಬಂದವನು ನಿರಾಶನಾಗಿ ಹಿಂತಿರುಗುವುದಿಲ್ಲ, ಅಮ್ಮನ ದ್ವಾರದಲ್ಲಿ ಬೇಡಿದವನು ಖಂಡಿತ ಪ್ರಸನ್ನತೆಯನ್ನು ಪಡೆಯುತ್ತಾನೆ” ಎನ್ನುವುದು ಭಕ್ತರ ನಂಬಿಕೆ. ರಾಂ ಅಜೆಕಾರು ಕಾರ್ಕಳ #ನವರಾತ್ರಿ #ನವರಾತ್ರಿ ಹಬ್ಬದ ಶುಭಾಶಯಗಳು....p #💐ನವರಾತ್ರಿ ಹಬ್ಬದ ಶುಭಾಶಯಗಳು 🙏 #🙏🚩ನವರಾತ್ರಿ ಹಬ್ಬದ ಶುಭಾಶಯಗಳು🚩🚩🚩 #ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು ಮತ್ತು ನಮ್ಮ ಮನೆಯದಸರಾ ಗೋಂಬೇಗಳು
9 likes
11 shares