🚨ರಾಮೇಶ್ವರಂ ಕೆಫೆ ವಿರುದ್ಧ FIR ದಾಖಲು😱
22 Posts • 33K views
@Trends Belagavi
2K views 4 days ago
#🚨ರಾಮೇಶ್ವರಂ ಕೆಫೆ ವಿರುದ್ಧ FIR ದಾಖಲು😱 ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಪ್ರಸಿದ್ಧ ರಾಮೇಶ್ವರಂ ಕೆಫೆಯಲ್ಲಿ ಊಟದಲ್ಲಿ ಹುಳ ಕಂಡುಬಂದ ಪ್ರಕರಣ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಆ ಹುಳದ ಜೊತೆಗೆ ಕೆಫೆ ಮಾಲೀಕರು ಸುಳ್ಳು ದೂರು ನೀಡಿ ಗ್ರಾಹಕನಿಗೆ ಮಾನಹಾನಿ ಮಾಡಿದ ಆರೋಪದಡಿ ಮಾಲೀಕರಾದ ದಿವ್ಯಾ ರಾಘವೇಂದ್ರ ರಾವ್, ರಾಘವೇಂದ್ರ ರಾವ್ ಮತ್ತು ಮ್ಯಾನೇಜರ್ ಸುಮಂತ್ ಎಂಬುವವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.ಬೆಂಗಳೂರು ವಿಮಾನ ನಿಲ್ದಾಣದ ಡಿಪಾರ್ಚರ್ ಪ್ರದೇಶದಲ್ಲಿರುವ ರಾಮೇಶ್ವರಂ ಕೆಫೆಯ ಊಟದಲ್ಲಿ ಹುಳ ಕಂಡುಬಂದಿತ್ತು. ಆಘಾತಗೊಂಡ ಯುವಕರು ತಕ್ಷಣ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡರು. ವಿಡಿಯೋ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿತ್ತು. ಆದರೆ ಇದೇ ಸಮಯಕ್ಕೆ ಕೆಫೆಗೆ ಅನಾಮಧೇಯ ಕರೆ ಬಂದಿದ್ದು, ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಕರೆಯನ್ನು ವಿಡಿಯೋ ಮಾಡಿದ ಯುವಕರೇ ಮಾಡಿದ್ದಾರೆಂದು ಭಾವಿಸಿದ ಕೆಫೆ ಮಾಲೀಕರು ತಕ್ಷಣ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಅವರು ಯುವಕರ ಮೇಲೆ ಬ್ಲ್ಯಾಕ್‌ಮೇಲ್ ಮತ್ತು ಹಣಕ್ಕೆ ಬೇಡಿಕೆ ಇಟ್ಟ ಆರೋಪ ಹೊರಿಸಿದ್ದರು. #😞 ಮೂಡ್ ಆಫ್ ಸ್ಟೇಟಸ್ #📰ಇಂದಿನ ಅಪ್ಡೇಟ್ಸ್ 📲 #🆕ಲೇಟೆಸ್ಟ್ ಅಪ್ಡೇಟ್ಸ್ 📰
4 likes
12 shares