ಕಾಯಕವೇ ಕೈಲಾಸ..
945 views
22 days ago
ಶ್ರೀ ಗುರು ಬಸವ ಲಿಂಗಾಯ ನಮಃ.. "ಭಾಗ್ಯವುಳ್ಳ ಪುರುಷಂಗೆ ಕಾಮಧೇನು ಕಾಮಿಸಿದುದನೀವುದಯ್ಯಾ. ನಿರ್ಭಾಗ್ಯ ಪುರುಂಷಗೆ ಕಾಮಧೇನು ತುಡುಗುಣಿಯಾಗಿ ತೋರುವುದಯ್ಯಾ. ಸತ್ಯಪುರುಷಂಗೆ ಕಲ್ಪವೃಕ್ಷ ಕಲ್ಪಿಸಿದುದನೀವುದಯ್ಯಾ. ಅಸತ್ಯಪುರುಷಂಗೆ ಕಲ್ಪವೃಕ್ಷ ಬೊಬ್ಬುಳಿಯಾಗಿ ತೋರುವುದಯ್ಯಾ. ಧರ್ಮಪುರುಷಂಗೆ ಚಿಂತಾಮಣಿ ಚಿಂತಿಸಿದುದನೀವುದಯ್ಯಾ. ಅಧರ್ಮಪುರುಷಂಗೆ ಚಿಂತಾಮಣಿ ಗಾಜಿನಮಣಿಯಾಗಿ ತೋರುವುದಯ್ಯಾ. ಶ್ರೀಗುರು ಕಾರುಣ್ಯವುಳ್ಳ ಸದ್ಭಕ್ತಂಗೆ ಜಂಗಮಲಿಂಗವಾಗಿ ತೋರುವುದಯ್ಯಾ. ಭಕ್ತನಲ್ಲದ ಪಾಪಿಷ್ಠಂಗೆ ಜಂಗಮಲಿಂಗ ಮಾನವನಾಗಿ ತೋರುವುದಯ್ಯಾ. ಉರಿಲಿಂಗಪೆದ್ದಿಗಳರಸು ಒಲ್ಲನವ್ವಾ.. ✍🏻 ಉರಿಲಿಂಗ ಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆಯವರ ವಚನ.. ಬಸವ ಬೆಳಗಿನ ಶರಣು ಶರಣಾರ್ಥಿಗಳು 🙏🏻 #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ