ವಚನಗಳು
3K Posts • 932K views
14-1-1155 ರಂದು.. ವಿಶ್ವಗುರು ಬಸವಣ್ಣನವರು 12 ನೇಯ ಶತಮಾನದಲ್ಲಿ ಕಪ್ಪಡಿ ಸಂಗಮ (ಕೂಡಲಸಂಗಮ) ದಲ್ಲಿ *ಇಷ್ಟಲಿಂಗ* ವನ್ನು ಕಂಡುಹಿಡಿದ ದಿನ ಆದ್ದರಿಂದ ಈ ದಿನದಂದು *ಲಿಂಗಾಯತ ಧರ್ಮ* ಸಂಸ್ಥಾಪನಾ ದಿನಾಚರಣೆಯ ಹಾರ್ದಿಕ ಶುಭಾಶಯಗಳು.. ತಮ್ಮೆಲ್ಲರಿಗೂ ಶುಭವಾಗಲಿ.. #//🌳ವಚನ ಸಾಹಿತ್ಯ 🌳// #ವಚನಗಳು #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ #ಬಸವಾದಿ ಶರಣ ಶರಣೆಯರು
4 likes
19 shares
ಈ ವಚನವು ವಿಶ್ವಗುರು ಬಸವಣ್ಣನವರ ಪ್ರಸಿದ್ಧ ವಚನಗಳಲ್ಲಿ ಒಂದಾಗಿದೆ. ವೆಗ್ಗಳ ಎಂದರೆ ಹೆಚ್ಚಿನದು, ಮಿಗಿಲಾದದ್ದು ಅಥವಾ ಶ್ರೇಷ್ಠವಾದುದು ಎಂದು ಅರ್ಥ. ಸಾಮಾನ್ಯ ಧಾರ್ಮಿಕ ಆಚರಣೆಗಳಾದ ತಿಥಿ, ವಾರ, ನಕ್ಷತ್ರ, ಗ್ರಹಣ, ಸಂಕ್ರಾಂತಿ ಅಥವಾ ಏಕಾದಶಿಯಂತಹ ವ್ರತಗಳಿಗಿಂತಲೂ ಮರೆಯದೆ ಶಿವನ ಸ್ಮರಣೆಯಲ್ಲಿರುವುದು ಶ್ರೇಷ್ಠವಾದುದು ಎಂದು ಬಸವಣ್ಣನವರು ಇಲ್ಲಿ ಪ್ರತಿಪಾದಿಸಿದ್ದಾರೆ. ಹೋಮ, ಹವನ, ನೇಮ, ಜಪ, ತಪಗಳಂತಹ ಬಾಹ್ಯ ಆಚರಣೆಗಳಿಗಿಂತಲೂ, ಮನಸ್ಸಿನಲ್ಲಿ ಸದಾ ಕಾಲ ಶಿವನನ್ನು ಸ್ಮರಿಸುತ್ತಾ, ಆ ಸೂಕ್ಷ್ಮವಾದ ಶಿವಪಥ ಲಿಂಗಾಂಗ ಸಾಮರಸ್ಯ ಅರಿತು ನಡೆಯುವ ಭಕ್ತನಿಗೆ ಇವು ಯಾವುದರ ಹಂಗೂ ಇರುವುದಿಲ್ಲ. ಅಂತಹ ಭಕ್ತನಿಗೆ ಭಕ್ತಿಯೇ ಸರ್ವಸ್ವ ಮತ್ತು ಅದುವೇ ಎಲ್ಲ ಆಚರಣೆಗಳಿಗಿಂತ ಮಿಗಿಲಾದದ್ದು. ಮೂಢನಂಬಿಕೆ ಮತ್ತು ಬಾಹ್ಯ ಕ್ರಿಯೆಗಳಿಗಿಂತ ಅಂತರಂಗದ ಶುದ್ಧ ಭಕ್ತಿ ಮತ್ತು ಸದಾಕಾಲದ ಶಿವಚಿಂತೆ ಶಿವಜ್ಞಾನ ಶಿವಸ್ಮರಣೆಯೇ ಶ್ರೇಷ್ಠವೆಂಬುದು ಈ ವಚನದ ಸಾರ.. ಜಯ ಬಸವ.. ಜಯ ಲಿಂಗಾಯತ ಧರ್ಮ.. #ವಚನಗಳು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಬಸವಾದಿ ಶರಣ ಶರಣೆಯರು #ಶರಣ ಸಾಹಿತ್ಯ
18 likes
24 shares