ಫಾಲೋ
ಕಾಯಕವೇ ಕೈಲಾಸ..
@76865063
3,424
ಪೋಸ್ಟ್ಸ್
2,364
ಫಾಲೋವರ್ಸ್
ಕಾಯಕವೇ ಕೈಲಾಸ..
666 ವೀಕ್ಷಿಸಿದ್ದಾರೆ
23 ಗಂಟೆಗಳ ಹಿಂದೆ
"ತೊತ್ತಿಂಗೇಕೆ ಲಕ್ಷಣ??? ಬಂಟಂಗೇಕೆ ಆಚಾರ??? ಆಗಮವೇಕೆ ಡಿಂಗರಿಗಂಗೆ, ಒಕ್ಕುದನುಂಬುವಂಗಯ್ಯಾ??? ಕೂಡಲಸಂಗಮದೇವಾ ನಿಮ್ಮ ನಂಬುವುದಾಚಾರವಯ್ಯಾ.. ✍🏻 ಕ್ರಾಂತಿಯೋಗಿ ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಕಾಯಕವೇ ಕೈಲಾಸ..
513 ವೀಕ್ಷಿಸಿದ್ದಾರೆ
23 ಗಂಟೆಗಳ ಹಿಂದೆ
ಶ್ರೀ ಗುರು ಬಸವ ಲಿಂಗಾಯತ ನಮಃ.. "ತನ್ನದಾದರೇನು ಕನ್ನಡಿ, ಅನ್ಯರದಾದರೇನು ಕನ್ನಡಿ, ತನ್ನ ರೂಪ ಕಂಡರೆ ಸಾಲದೇ??? ಸದ್ಗುರು ಅವನಾದಡೇನು??? ತನ್ನನರುಹಿದಡೆ ಸಾಲದೇ??? ಹೇಳಾ ಸಿಮ್ಮುಲಿಗೆಯ ಚೆನ್ನರಾಮಾ! ✍️ ಶರಣ ಚಂದಿಮರಸರವರ ವಚನ.. ಶರಣು ಶರಣಾರ್ಥಿಗಳು🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಕಾಯಕವೇ ಕೈಲಾಸ..
675 ವೀಕ್ಷಿಸಿದ್ದಾರೆ
23 ಗಂಟೆಗಳ ಹಿಂದೆ
"ಒಡೆಯರು ಬಂದರೆ ಗುಡಿ ತೋರಣವ ಕಟ್ಟಿ.. ನಂಟರು ಬಂದರೆ ಸಮಯವಿಲ್ಲೆನ್ನಿ.. ಅಂದೇಕೆ ಬಾರರು ನೀರಿಂಗೆ ನೇಣಿಂಗೆ ಹೊರಗಾದಂದು.. ಸಮಯಾಚಾರಕ್ಕೆ ಒಳಗಾದಂದು.. ಪರುಷ ಮುಟ್ಟಲು ಕಬ್ಬುನ ಸುವರ್ಣವಾಯಿತ್ತು ಬಳಿಕ ಬಂಧುಗಳುಂಟೆ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ಕಾಯಕವೇ ಕೈಲಾಸ..
647 ವೀಕ್ಷಿಸಿದ್ದಾರೆ
23 ಗಂಟೆಗಳ ಹಿಂದೆ
"ಅಣ್ಣ ತಮ್ಮ ಹೆತ್ತಯ್ಯ ಆವ ಗೋತ್ರದವರಾದಡೇನು.. ಲಿಂಗ ಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯಾ.. ನಂಟು ಭಕ್ತಿ ನಾಯಕ ನರಕ ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಕಾಯಕವೇ ಕೈಲಾಸ..
336 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
ಶ್ರೀ ಗುರು ಬಸವ ಲಿಂಗಾಯ ನಮಃ.. "ಆದಿಯಲ್ಲಿ ಬಸವಣ್ಣನುತ್ಪತ್ಯವಾದ ಕಾರಣ ನಾಗಲೋಕದ ನಾಗಗಣಂಗಳಿಗೆಯೂ ಬಸವಣ್ಣನ ಪ್ರಸಾದ. ಮತ್ರ್ಯಲೋಕದ ಮಹಾಗಣಂಗಳಿಗೆಯೂ ಬಸವಣ್ಣನ ಪ್ರಸಾದ. ದೇವಲೋಕದ ದೇವಗಣಂಗಳಿಗೆಯೂ ಬಸವಣ್ಣನ ಪ್ರಸಾದ. ಗುಹೇಶ್ವರಾ ನಿಮ್ಮಾಣೆ, ಎನಗೆಯೂ ನಿನಗೆಯೂ ಬಸವಣ್ಣನ ಪ್ರಸಾದ.. ✍🏻 ಶೂನ್ಯ ಪೀಠ ಧೀಶ ಅಲ್ಲಮಪ್ರಭು ದೇವರ ವಚನ.. ಸಮಸ್ತ ನಾಡಿನ ಜನತೆಗೆ ಬಸವಧರ್ಮ ಕಲ್ಯಾಣ ಕ್ರಾಂತಿಯ ವಿಜಯೋತ್ಸವ ಹಾರ್ದಿಕ ಶುಭಾಶಯಗಳು 🙏🏻 #ಶರಣ ಸಾಹಿತ್ಯ #ಬಸವಣ್ಣನವರ ವಚನಗಳು #//🌳ವಚನ ಸಾಹಿತ್ಯ 🌳// #ಬಸವಾದಿ ಶರಣ ಶರಣೆಯರು #ವಚನಗಳು
ಕಾಯಕವೇ ಕೈಲಾಸ..
561 ವೀಕ್ಷಿಸಿದ್ದಾರೆ
1 ದಿನಗಳ ಹಿಂದೆ
"ತನ್ನ ವಿಚಾರಿಸಲೊಲ್ಲದು ಇದಿರ ವಿಚಾರಿಸ ಹೋಹುದೀ ಮನವು. ಏನು ಮಾಡುವೆನೀ ಮನವನು: ಎಂತು ಮಾಡುವೆನೀ ಮನವನು ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ??? ✍🏻 ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
See other profiles for amazing content