ಪ್ರೀತಿಯನ್ನು ವರ್ಣಿಸಲು ಸಾವಿರ ಪದಗಳಿವೆ.ಆದರೆ❓ಕೆಲವು ಮಾತುಗಳು ಪದಗಳಾಗಿರುವುದಿಲ್ಲ,ಅವು ಉಸಿರಾಗಿರುತ್ತವೆ.
"ಅವಳು ನನ್ನ ರಕ್ತ ಹೃದಯ ವರ್ಧನಿ" ಅನ್ನುವುದು ಒಂದು ಅಂತಹ ನನ್ನ ಉಸಿರು.
ರಕ್ತ ಎಂದರೆ❔ಕೇವಲ ದೇಹದಲ್ಲಿ ಹರಿಯುವ ಕೆಂಪು ದ್ರವವಲ್ಲ.ಅದು ಜೀವದ ಆಧಾರ.ಅದು ಕಣ್ಣಿಗೆ ಕಾಣುವುದಿಲ್ಲ,ಆದರೆ❓ಅದು ಇಲ್ಲದಿದ್ದರೆ ಜೀವವೇ ಇಲ್ಲ.ಅವಳು ಹಾಗೆ.ಅವಳನ್ನು ಪ್ರತಿಕ್ಷಣ ನೋಡಬೇಕಿಲ್ಲ,ಮುಟ್ಟಬೇಕಿಲ್ಲ,ಆದರೆ❔ಅವಳು ನನ್ನೊಳಗೆ ಹರಿಯುತ್ತಿದ್ದಾಳೆ ಎಂಬ ಅರಿವೇ ನನ್ನನ್ನು ಬದುಕಿಸುತ್ತದೆ.ಅವಳು ನನ್ನ ಅಸ್ತಿತ್ವದ ಭಾಗವಾಗಿಬಿಟ್ಟಿದ್ದಾಳೆ.
ಹೃದಯ ಎಂದರೆ❓ಭಾವನೆಗಳ ಮನೆ.ಬುದ್ಧಿ ಲೆಕ್ಕ ಹಾಕುತ್ತದೆ,ಹೃದಯ ಅನುಭವಿಸುತ್ತದೆ.ಅವಳು ನನ್ನ ಬುದ್ಧಿಯ ಆಯ್ಕೆಯಲ್ಲ,ಹೃದಯದ ಅನಿವಾರ್ಯತೆ.ಅವಳ ನೆನಪಾದಾಗ ಹೃದಯ ಬಡಿತ ಜೋರಾಗುವುದಲ್ಲ,ಆ ಬಡಿತವೇ ಅವಳ ಹೆಸರಾಗಿಬಿಟ್ಟಿದೆ.
ವರ್ಧನಿ ಎಂದರೆ❔ಹೆಚ್ಚಿಸುವವಳು,ಬೆಳೆಸುವವಳು.
ನಿಜವಾದ ಪ್ರೀತಿ ಎಂದಿಗೂ ಕಡಿಮೆ ಮಾಡುವುದಿಲ್ಲ,ಅದು ಯಾವಾಗಲೂ ವರ್ಧಿಸುತ್ತದೆ.ಅವಳು ಬಂದ ಮೇಲೆ ನನ್ನ ನಗು ಹೆಚ್ಚಾಯಿತು,ನನ್ನ ಕನಸುಗಳು ಹೆಚ್ಚಾದವು,ನನ್ನ ಬದುಕುವ ಆಸೆ ಹೆಚ್ಚಾಯಿತು.ಅವಳು ನನ್ನನ್ನು ನನ್ನಿಂದಲೇ ದೊಡ್ಡವನನ್ನಾಗಿ ಮಾಡಿದಳು.
"ಅವಳು ನನ್ನ ರಕ್ತ ಹೃದಯ ವರ್ಧನಿ".ನೀನು ನನ್ನ ದೇಹವಲ್ಲ,ನೀನು ನನ್ನ ಜೀವ.ನೀನು ನನ್ನ ಭಾವನೆಯಲ್ಲ,ನೀನು ನನ್ನ ಹೃದಯ.ಮತ್ತು ನೀನು ಬಂದ ಮೇಲೆ ನಾನು ಇನ್ನೂ ಹೆಚ್ಚು ಜೀವಂತವಾಗಿದ್ದೇನೆ.
ಇದು ಪ್ರೇಮಿಯೊಬ್ಬನ ಸ್ವಾರ್ಥವಲ್ಲ,ಇದು ನನ್ನನ ನಿನಗೆ ಸಮರ್ಪಣೆ ಮಾಡಿರೋದು
#ಅವಳ ನೆನಪಲ್ಲಿ #ಮೌನ ಮನದ ಪ್ರತಿಬಿಂಬ #ಎರಡು ಹೃದಯಗಳು #ಮನದ ಮಾತು ಬರಹದಲ್ಲಿ #ನನ್ನ ಪ್ರಪಂಚ ❣️