ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
ಕನ್ನಿಮೂಲ ಗಣಪತಿಯೇ ಶರಣಂ ಅಯ್ಯಪ್ಪ
ಕಟ್ಟನ್ನು ಕಟ್ಟಿಕೊಂಡು, ಇರುಮುಡಿಯ ಹೊತ್ತುಕೊಂಡು
ಶಬರಿಗಿರಿಗೆ ಬರ್ತಿವಪ್ಪ ಅಯ್ಯಪ್ಪಾ
ನಿಷ್ಠೆಯಿಂದ ನಿಯಮದಿಂದ ಶರಣಘೋಷ ಮಾಡಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಗುರುಸ್ವಾಮಿ ಹೇಳುವಂತೆ ನಾವೆಲ್ಲ ನಡೆದುಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಎರುಮೇಲಿ ಕ್ಷೇತ್ರವನು ನಾವೆಲ್ಲ ನೋಡಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ತಾಳವನು ಹಾಕುತಲಿ ಬೇಟೆನಾಟ್ಯ ಆಡಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ವಾವರನ ಪೂಜೆಮಾಡಿ ಭಕ್ತಿಯಿಂದ ಬೇಡಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಹೂದೋಟದಿ ಇರುವಂತ ಶಾಸ್ತನ ನೆನೆಸಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಸ್ವಾಮಿ ಹೆಜ್ಜೆ ಮೇಲೆ ಹೆಜ್ಜೆ ಹಾಕಿ, ಭಕ್ತಿಯನು ತುಂಬಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ವೇಗ ಭಲ , ಸ್ವಾಮಿ ನೀ ತಾರಯ್ಯ
ಪಾದ ಭಲ , ಸ್ವಾಮಿ ನೀ ನೀಡಯ್ಯ
ಯಾತ್ರೆಯಪ್ಪ ಯಾತ್ರೆಯು ಶಬರಿಗಿರಿಯ ಯಾತ್ರೆಯು
ವೀರಾಧಿ ವೀರನೆ ನೀಡು ನಮಗೆ ರಕ್ಷೆಯು
||ಯಾತ್ರೆಯಪ್ಪ||
||ಕಟ್ಟನ್ನು||
ಒಬ್ಬರನ್ನು ಮತ್ತೊಬ್ಬರು ಸ್ವಾಮಿ ಎಂದು ಹೇಳಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಕಾಳಗಟ್ಟಿ ಆಶ್ರಮ ಕಣ್ಣಾರೆ ನೋಡಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಕಾಳಗಟ್ಟಿ ಆಶ್ರಮದಿ ವಿಶ್ರಾಮ ಪಡೆದುಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ನಡೆದು ಬಂದ ಆಯಾಸ ನಾವೆಲ್ಲ ಕಳೆದುಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಮುಂಜಾನೆ ಸ್ನಾನ ಮಾಡಿ , ನಿನ್ನ ನಾಮ ಹೇಳಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಅಳುದ ನದಿ ಸ್ನಾನದಿಂದ ಹೊಸ ಶಕ್ತಿ ತುಂಬಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಸ್ವಾಮಿ ನಿನ್ನ ರೂಪವನೆ ಧ್ಯಾನವನ್ನು ಮಾಡಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಸ್ವಾಮಿ ಗತಿ ನೀನೆ ಮತಿ ನೀನೆ , ಎಂದು ನಿನ್ನ ನಂಬಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ವೇಗ ಭಲ , ಸ್ವಾಮಿ ನೀ ತಾರಯ್ಯ
ಪಾದ ಭಲ, ಸ್ವಾಮಿ ನೀ ನೀಡಯ್ಯ
ಯಾತ್ರೆಯಪ್ಪ ಯಾತ್ರೆಯು ಶಬರಿಗಿರಿಯ ಯಾತ್ರೆಯು
ವೀರಾಧಿ ವೀರನೆ ನೀಡು ನಮಗೆ ರಕ್ಷೆಯು
||ಯಾತ್ರೆಯಪ್ಪ||
||ಕಟ್ಟನ್ನು||
ಸ್ವಾಮಿಯೇ ಶರಣಂ ಅಯ್ಯಪ್ಪ
ಕಟ್ಟು ಕಟ್ಟು ಇರುಮುಡಿ ಕಟ್ಟು
ಶಬರಿಗಿರಿಗೆ ಇರುಮುಡಿ ಕಟ್ಟು
ಯಾರಿಗಾಗಿ ಸ್ವಾಮಿಗಾಗಿ
ಸ್ವಾಮಿಯ ಕಂಡ್ರೆ ಮೋಕ್ಷ ನಮಗೆ
ಮಹಿಷಿ ಬಿದ್ದಂತ ಹಳ್ಳ ಕಾಣದಂತೆ ಮಾಡುತಲಿ
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಕಲ್ಲೆಸೆಯೊ ಬೆಟ್ಟದಲಿ ,ನಾವೆಲ್ಲ ಕಲ್ಲೆಸೆದು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಅಲ್ಲಿಂದ ನಾವೆಲ್ಲ ಅಳುದ ಬೆಟ್ಟ ಹತ್ತಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಅಳುದಗಿರಿ ಶಿಖರವನು ನಾವೆಲ್ಲ ಸೇರಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಪುದುಮಾರೈ ಕೋಟೆಯನು ನಾವೆಲ್ಲ ದಾಟಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಮುಳ್ಳು ಚುಚ್ಚಿಕೊಂಡಾಗ ಹೂವಂತೆ ಭಾವಿಸುತ
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಕಲ್ಲುಗಳು ಒತ್ತಿದಾಗ ಮೆತ್ತೆಯನು ನೆನೆಯುತಲಿ
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಸ್ವಾಮಿ, ಕಷ್ಟಾದ ಕರಿಮಲೆಯ ಕಂಡು ನಿನ್ನ ಧ್ಯಾನಿಸುತ
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ವೇಗ ಭಲ , ಸ್ವಾಮಿ ನೀ ತಾರಯ್ಯ
ಪಾದ ಭಲ , ಸ್ವಾಮಿ ನೀ ನೀಡಯ್ಯ
ಯಾತ್ರೆಯಪ್ಪ ಯಾತ್ರೆಯು ಶಬರಿಗಿರಿಯ ಯಾತ್ರೆಯ
ವೀರಾಧಿ ವೀರನೆ ನೀಡು ನಮಗೆ ರಕ್ಷೆಯು
||ಯಾತ್ರೆಯಪ್ಪ||
||ಕಟ್ಟನ್ನು||
ಕರಿಮಲೆಯ ಹತ್ತುವಾಗ ಸ್ವಾಮಿ ನಿನ್ನ ಕೈ ಹಿಡಿದು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಕರಿಮಲೆಯ ಇಳಿಯುವಾಗ ನಿನ್ನನ್ನೆ ನೆನೆ ನೆನೆದು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಚುರುಕಾಗಿ ಸರಸರನೆ ಹೆಜ್ಜೆಯನು ಹಾಕುತಲಿ
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಆನೆವಟ್ಟಂ ನೋಡಿಕೊಂಡು ಪಂಪಾನದಿ, ಸೇರಿಕೊಂಡು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಪಂಪಾನದಿ ಸ್ನಾನವನು ಮಾಡಿ ನಾವು ಶುಧ್ಧರಾಗಿ
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಪಂಪೆಯಲಿ ದೀಪ ಹಚ್ಚಿ , ಅನ್ನದಾನ ಮಾಡುತಲಿ
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಪಂಪಾ ಶ್ರೀ ಗಣಪತಿಯ ನಾವೆಲ್ಲಾ ಬೇಡಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪ
ಸ್ವಾಮಿ, ನೀಲಿಮಲೆ ಶಬರಿ ತಾಯಿ , ಇದ್ದಂತ ಮಲೆ ದಾಟಿ
ಸನ್ನಿಧಿಗೆ ಬಬರ್ತೀವಪ್ಪ ಅಯ್ಯಪ್ಪಾ
ವೇಗ ಭಲ , ಸ್ವಾಮಿ ನೀ ತಾರಯ್ಯ
ಪಾದ ಭಲ , ಸ್ವಾಮಿ ನೀ ನೀಡಯ್ಯ
ಯಾತ್ರೆಯಪ್ಪ ಯಾತ್ರೆಯು ಶಬರಿಗಿರಿಯ ಯಾತ್ರೆಯ
ವೀರಾಧಿ ವೀರನೆ ನೀಡು ನಮಗೆ ರಕ್ಷೆಯು
||ಯಾತ್ರೆಯಪ್ಪ||
||ಕಟ್ಟನ್ನು||
ಕಾಲುಗಳು ನೋಯುತಿರೆ ನೀಲಿಮಲೆ ಹತ್ತಿಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಊರುಗೋಲು ತರದಲ್ಲಿ ಒಬ್ಬರ ಭುಜ ಒಬ್ಬ ಹಿಡಿದು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಅಪ್ಪಾಚಿ ಮೇಡು ನೋಡಿ ಅಯ್ಯಪ್ಪಾ ಎಂದು ಕೊಂಡು
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಇಪ್ಪಾಚಿ ಹಳ್ಳದಲಿ ಜೋಪಾನದಿಂದಿಳಿದು
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಶಬರಿಪೀಠ ನೋಡುತಲಿ ಕಾಯನ್ನು ಹೊಡೆಯುತಲಿ
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಶರಂಗುತ್ತಿಯಲ್ಲಿ ನಾವು ಶರಗಳನ್ನು ಚುಚ್ಚುತಲಿ
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಸ್ವಾಮಿ , ಅಯ್ಯಪ್ಪ ನಾವೆಲ್ಲಾ ಪರವಶದಿ ನೀ ನಿರುವ
ಶಬರಿಗಿರಿಗೆ ಬರ್ತೀವಪ್ಪ ಅಯ್ಯಪ್ಪಾ
ಹದಿನೆಂಟು ಮೆಟ್ಟಿಲನು ನಾವೆಲ್ಲ ಹತ್ತುತಲಿ
ಸನ್ನಿಧಿಗೆ ಬರ್ತೀವಪ್ಪ ಅಯ್ಯಪ್ಪಾ
ಬಂದೇವಪ್ಪ ದರುಶನ ಕಂಡೇವಪ್ಪ
ತಂದೇವಪ್ಪ ಇರುಮುಡಿ ತಂದೇವಪ್ಪ
ಶರಣಂ ಶರಣಂ ಅಯ್ಯಪ್ಪಾ, ಸ್ವಾಮಿ ಶರಣಂ ಅಯ್ಯಪ್ಪಾ
ಸ್ವಾಮಿ ಶರಣಂ ಅಯ್ಯಪ್ಪಾ ,ಅಯ್ಯಪ್ಪ ಶರಣಂ ಅಯ್ಯಪ್ಪಾ
||ಶರಣಂ ಶರಣಂ|| #🙏 ಭಕ್ತಿ ವಿಡಿಯೋಗಳು 🌼 #🙏ನಮಸ್ಕಾರ #ಅಯ್ಯಪ ಸ್ವಾಮಿ # 🙏🙏 ಶಬರಿಮಲೆ 🙏🙏 ##ಅಯ್ಯಪ #ಅಯ್ಯಪ್ಪಸ್ವಾಮಿ #🙏ಅಯ್ಯಪ ಸ್ವಾಮಿ ಮಾಲೆ 🌺